Current Date 17 Jun, 2026

ಅಮರಾವತಿ ಪೊಲೀಸ್ ಸ್ಟೇಷನ್‌ ಟೀಸರ್ ಬಿಡುಗಡೆ ಮಾಡಿದ ವಿನೋದ್ ರಾಜ್...

ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳುತ್ತಾನೇ ಇರುತ್ತಾರೆ. ಆದರೂ ಸಿನಿಮಾ ಮೇಲೀನ ವ್ಯಾಮೋಹ ಅನೇಕರಿಗೆ ಕಡಿಮೆಯಾಗಲ್ಲ. ಇದಕ್ಕೆ ಮತ್ತೊಂದು ಉದಾಹರಣೆ "ಅಮರಾವತಿ ಪೊಲೀಸ್ ಸ್ಟೇಷನ್".

ಹೌದು, "ಅಮರಾವತಿ ಪೊಲೀಸ್ ಸ್ಟೇಷನ್"... 2022ರಲ್ಲಿ ಮುಹೂರ್ತ ಭಾಗ್ಯ ಕಂಡಿದ್ದ ಸಿನಿಮಾ. ಆ ಕಾಲದಲ್ಲಿ ಈ ಚಿತ್ರದ ನಾಯಕನ ಪಾತ್ರಕ್ಕೆ ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ಬಣ್ಣ ಹಚ್ಚಿದ್ದರು. ಮಗನ ಸಿನಿಮಾಕ್ಕೆ ಹಾರೈಸಲು ನಟ ಜಗ್ಗೇಶ್ ಅವರು ಆಗಮಿಸಿದ್ದರು. ಆರಂಭದ ದೃಶ್ಯಕ್ಕೆ ನಟ ಜಗ್ಗೇಶ್ ಅವರು ಕ್ಲ್ಯಾಪ್ ಮಾಡಿ, ಚಿತ್ರರಂಗಕ್ಕೆ ಶುಭ ಕೋರಿದ್ದರು.